🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 12/09/2026
ಗಂಗಾವತಿ: ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಉಳುಮೆ ರಂಗಭೂಮಿ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಎರಡು ತಿಂಗಳ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಸೆ.13ರಂದು ಸಂಜೆ 6 ಗಂಟೆಗೆ ನಡೆಯಲಿದೆ.
ಸಮಾರೋಪದ ಅಂಗವಾಗಿ ರಂಗಾಯಣದ ಕಲಾವಿದ ಹಾಗೂ ನಿರ್ದೇಶಕ ರಮೇಶ್ ಕೆ. ಬೆಣಕಲ್ ಅವರ ನಿರ್ದೇಶನದಲ್ಲಿ ‘ಕಪಟ ಸನ್ಯಾಸಿ’ ನಾಟಕದ ಉಚಿತ ಪ್ರದರ್ಶನ ಆಯೋಜಿಸಲಾಗಿದೆ. ಎರಡು ತಿಂಗಳ ಕಾಲ ನಡೆದ ತರಬೇತಿ ಶಿಬಿರದಲ್ಲಿ ಮಕ್ಕಳಿಗೆ ನಟನಾ ಕೌಶಲ ಸೇರಿದಂತೆ ರಂಗಭೂಮಿಯ ವಿವಿಧ ಆಯಾಮಗಳ ಕುರಿತು ತರಬೇತಿ ನೀಡಲಾಗಿದೆ.
ಮೈಸೂರು ರಂಗಾಯಣದಲ್ಲಿ ತರಬೇತಿ ಪಡೆದು, ರಂಗಭೂಮಿ ತಿರುಗಾಟದಲ್ಲಿ ಅಪಾರ ಅನುಭವ ಹೊಂದಿರುವ ಸ್ಥಳೀಯ ಪ್ರತಿಭೆ ರಮೇಶ್ ಕೆ. ಬೆಣಕಲ್ ನಿರ್ದೇಶನ ಹಾಗೂ ಸಹ ನಿರ್ದೇಶನದ ಜವಾಬ್ದಾರಿ ವಹಿಸಿದ್ದರು. ನೀನಾಸಂ ಪ್ರತಿಭಾವಂತೆ ಸುಶ್ಮಿತಾ ಪಿ. ಮೋಹನ್ ಅವರು ಶಿಬಿರದ ನಿರ್ವಹಣೆ ಹಾಗೂ ವಿನ್ಯಾಸದಲ್ಲಿ ಸಹಕರಿಸಿದ್ದಾರೆ.
‘ಕಪಟ ಸನ್ಯಾಸಿ’ ನಾಟಕದಲ್ಲಿ 16ಕ್ಕೂ ಹೆಚ್ಚು ಮಕ್ಕಳು ವಿವಿಧ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮೈಸೂರಿನ ಸ್ವರೂಪ್ ನಿರ್ದೇಶನದ ‘ಮುದ್ದುಮೌನ’ ಕಿರುಚಿತ್ರವೂ ಬಿಡುಗಡೆಗೊಳ್ಳಲಿದೆ.
ರಂಗಕಲೆ ಹಾಗೂ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯೋಜಿಸಿರುವ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಉಳುಮೆ ರಂಗಭೂಮಿ ಸಂಸ್ಥೆಯ ಸಂಘಟಕರು ಮನವಿ ಮಾಡಿದ್ದಾರೆ.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ