October 16, 2026

ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಸಂಭ್ರಮದ ಸಡಗರ: ಉಡುಮಕಲ್‌ನಲ್ಲಿ ಸಾಂಸ್ಕೃತಿಕ ವೈಭವಕ್ಕೆ ಸಜ್ಜಾದ ಗಜಾನನ ಗೆಳೆಯರ ಬಳಗ

🟥 ಟಿ ಪಬ್ಲಿಕ್ ನ್ಯೂಸ್ | ಉಡುಮಕಲ್‌ದಿನಾಂಕ: 13/09/2026 ಉಡುಮಕಲ್‌ : ಗಣೇಶೋತ್ಸವದ ಅಂಗವಾಗಿ ಉಡುಮಕಲ್‌ನ ಪರಿಸರ ಸ್ನೇಹಿ ಗಜಾನನ…

🟥 ಟಿ ಪಬ್ಲಿಕ್ ನ್ಯೂಸ್ | ಉಡುಮಕಲ್‌
ದಿನಾಂಕ: 13/09/2026

ಉಡುಮಕಲ್‌ : ಗಣೇಶೋತ್ಸವದ ಅಂಗವಾಗಿ ಉಡುಮಕಲ್‌ನ ಪರಿಸರ ಸ್ನೇಹಿ ಗಜಾನನ ಗೆಳೆಯರ ಬಳಗದ ವತಿಯಿಂದ ಸೆ.14ರಂದು ಸೋಮವಾರ ವಿವಿಧ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಸಂಭ್ರಮದಿಂದ ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಂಗವಾಗಿ ಪರಿಸರ ಸ್ವಚ್ಛತೆ, ಶಾಲಾ ಮಕ್ಕಳಿಂದ ಜಾನಪದ ಹಾಗೂ ಭಕ್ತಿಗೀತೆಗಳಿಗೆ ನೃತ್ಯ ಸ್ಪರ್ಧೆ, ಪರಿಸರ ಸಂರಕ್ಷಣೆ ಕುರಿತ ನಾಟಕ ಸ್ಪರ್ಧೆ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಹಾಗೂ ಭಕ್ತರಿಗೆ ಪ್ರಸಾದ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ. ವಿಶೇಷವಾಗಿ ದಾನಿಗಳಿಗೆ ಸನ್ಮಾನ ಕಾರ್ಯಕ್ರಮವೂ ಆಯೋಜಿಸಲಾಗಿದೆ.

ಶಾಲಾ ಮಕ್ಕಳಲ್ಲಿ ಸ್ವಚ್ಛತಾ ಮನೋಭಾವ ಬೆಳೆಸುವುದು, ವಿವಿಧ ಧರ್ಮೀಯರ ನಡುವೆ ಸಾಮರಸ್ಯ ಹೆಚ್ಚಿಸುವುದು, ಮಹಿಳೆಯರಿಗೆ ಸಾಮಾಜಿಕ ಪ್ರಾಮುಖ್ಯತೆ ನೀಡುವುದು ಹಾಗೂ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಬಳಗದ ಪದಾಧಿಕಾರಿಗಳು ತಿಳಿಸಿದ್ದಾರೆ.

ಸಾಂಸ್ಕೃತಿಕ ಹಾಗೂ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸುವವರು 9686534223, 8971792554 ಸಂಖ್ಯೆಗೆ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಪ್ರಸಾದ ವ್ಯವಸ್ಥೆ ಹಾಗೂ ವಿಶೇಷ ದಾನ ನೀಡಲು ಇಚ್ಛಿಸುವವರು 9900549155, 8494979246, 7975798610 ಸಂಖ್ಯೆಗೆ ಸಂಪರ್ಕಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!