October 16, 2026

ಅಕ್ರಮವಾಗಿ ನಿವೇಶನ ಮಾರಾಟ : ಸವೆ೯ ನಡೆಸಿದ ಅಧಿಕಾರಿಗಳು

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 07/10/2026

ಗಂಗಾವತಿ: ನಗರದ ವಾರ್ಡ್ ನಂ.24ರ ಲಕ್ಷ್ಮೀಕ್ಯಾಂಪ್ ಸಮ್ಮದ್ ಸಾಬ್ ಲೇಔಟ್ ಸಮೀಪದ ಸರ್ಕಾರ ಮಂಜೂರಾತಿ ಜಮೀನನ್ನು ಭೂ ಪರಿವರ್ತನೆ ಮಾಡದೇ ಕಾನೂನುಬಾಹಿರವಾಗಿ ನಿವೇಶನಗಳನ್ನು ನಿರ್ಮಿಸಿ, ಮಾರಾಟ ಮಾಡಲಾಗಿದ್ದು, ದೂರು ಹಿನ್ನಲೆ ಅಧಿಕಾರಿಗಳು ಸವೆ೯ ನಡೆಸಿ, ಪರಿಶೀಲನೆ ಮುಂದಾಗಿದ್ದಾರೆ.

ಗಂಗಾವತಿ ಹೋಬಳಿಯ ಸರ್ವೇ ನಂ.183/2/4ರ ಒಟ್ಟು 38 ಗುಂಟೆ ಜಮೀನಿನಲ್ಲಿ ಅಕ್ರಮವಾಗಿ ನಿವೇಶನಗಳನ್ನು ನಿರ್ಮಿಸಿ ಮಾರಾಟ ಮಾಡಲಾಗುತ್ತಿದೆ ಎಂದು  ಜಿಲ್ಲಾ ಮಾದಿಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಶಿವಪ್ಪ ಅವರು 2025ರ ಫೆಬ್ರುವರಿ 18ರಂದು ಅರ್ಜಿ ಸಲ್ಲಿಸಿದ್ದರು.

ದೂರಿನ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ತಾಲೂಕು ಭೂಮಾಪಕರು ಜಂಟಿ ಸವೆ೯ ನಡೆಸಿದ್ದಾರೆ. ಜಮೀನಿನಲ್ಲಿ ಅನಧಿಕೃತವಾಗಿ ನಿವೇಶನಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿರುವುದು ಹಾಗೂ ಕಟ್ಟಡ ಕಾಮಗಾರಿ ನಡೆಯುತ್ತಿರುವುದು ಕಂಡುಬಂದಿದೆ. ಜಮೀನು ಸರ್ಕಾರಿ ಮಂಜೂರಾತಿಗೆ ಒಳಪಟ್ಟಿದ್ದು, ಸಕ್ಷಮ ಪ್ರಾಧಿಕಾರದಿಂದ ಅಗತ್ಯ ಪರವಾನಗಿ ಹಾಗೂ ಭೂ ಪರಿವರ್ತನೆ ಮಾಡಿಸಿಕೊಂಡಿರುವ ದಾಖಲೆಗಳನ್ನು ಏಳು ದಿನಗಳೊಳಗೆ ಸಲ್ಲಿಸುವಂತೆ ಸಂಬಂಧಪಟ್ಟವರಿಗೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ ಇದುವರೆಗೆ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ, ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ನಗರಸಭೆ ಹಾಗೂ ಸಂಬಂಧಪಟ್ಟ ಜಿಸ್ಕಾಂ ಅಧಿಕಾರಿಗಳ ಸಹಯೋಗದಲ್ಲಿ ಕೈಗೊಳ್ಳುವಂತೆ ಸೂಚಿಸಲಾಗಿದ್ದು, ಕಟ್ಟಡ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಿ, ಮುಂದಿನ ಕ್ರಮಕ್ಕೆ ಮುಂದಾಗಲಾಗುವುದು ಎಂದು ತಿಳಿಸಿದ್ದಾರೆ.

ವಿದ್ಯುತ್ ಸಂಪಕ೯ ಕಡಿತ : ಲಕ್ಷ್ಮೀಕ್ಯಾಂಪ್ ಸಮ್ಮದ್ ಸಾಬ್ ಲೇಔಟ್ ಸಮೀಪದ ಸರ್ಕಾರ ಮಂಜೂರಾತಿ ಜಮೀನನ್ನು ಭೂ ಪರಿವರ್ತನೆ ಮಾಡದೇ ಕಾನೂನುಬಾಹಿರವಾಗಿ ನಿವೇಶನಗಳನ್ನು ನಿರ್ಮಿಸಿ, ಮಾರಾಟ ಮಾಡಲಾಗಿದೆ. ಖರೀದಿ ಮಾಡಿದ ಸಾವ೯ಜನಿಕರು ಮನೆಗಳನ್ನು ನಿಮಿ೯ಸಿಕೊಂಡು ವಾಸವಾಗಿದ್ದಾರೆ. ಸುಮಾರು 15 ಕ್ಕೂ ಅಧಿಕ ಮನೆಗಳು ನಿಮಿ೯ಸಿಕೊಂಡಿದ್ದ ಮನೆಗಳಿಗೆ ಜೆಸ್ಕಾಂ ಇಲಾಖೆಯ ಅಧಿಕಾರಿಗಳು ವಿದ್ಯುತ್ ಕಡಿತ ಮಾಡಿದ್ದಾರೆ. ಹಾಗೂ ನಗರಸಭೆ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿಯನ್ನು ನೀಡಿ, ಪರಿಶೀಲನೆ ನಡೆಸಿದ್ದಾರೆ. ಕಂದಾಯ ನಿರೀಕ್ಷಕ ಮಹೇಶ ದಲಾಲ್, ಗ್ರಾಮ ಆಡಳಿತಾಧಿಕಾರಿ ಮಂಜುನಾಥ, ನಗರಸಭೆ ಅಧಿಕಾರಿಗಳಾದ ಬಸವರಾಜ, ಅಶೋಕ, ಎಎಸ್ಐ ಶಿವಶರಣ, ಸವೇ೯ ಇಲಾಖೆ ಅಧಿಕಾರಿ ಮಲ್ಲಿಕಾಜು೯ನ ಜೆಸ್ಕಾಂ ಇಲಾಖೆ ಎಇಇ ವಿಜಯ ಹಾಗೂ ಸಿಬ್ಬಂದಿಗಳು ಇದ್ದರು.

ಸರಕಾರದಿಂದ ಮಂಜೂರವಾಗಿದ್ದ ಜಮೀನನ್ನು ನಿಯಮ ಪ್ರಕಾರ ಭೂಪರಿವತ೯ನೆ ಮಾಡದೆ ಕಾನೂನು ಬಾಹಿರವಾಗಿ ಲೇಔಟ್ ನಿಮಿ೯ಸಿ ಪ್ಲಾಟ್ ಗಳ ಮಾರಾಟ ಮಾಡಲಾಗಿದೆ. ಅದನ್ನು ದೂರು ನೀಡಿದ ಹಿನ್ನಲೆಯಲ್ಲಿ ಅಧಿಕಾರಿಗಳು ಸವೆ೯ ನಡೆಸಿ, ಕೂಡಲೇ ಸರಕಾರದ ವಶಕ್ಕೆ ಪಡೆದುಕೊಳ್ಳಬೇಕು.

ಶಿವಪ್ಪ ಮಾದಿಗ, ಮಾದಿಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರು, ಗಂಗಾವತಿ

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!